'ಟೊರಾಂಟೋ ಐಲೆಂಡ್' ಮದ್ಯಭಾಗದಲ್ಲಿ ಮಕ್ಕಳು ಮತ್ತು ಅವರ ಪೋಶಕರಿಗೆ ಮುದಕೊಡುವ'ಫ್ರಾಂಕ್ಲಿನ್ ಮಕ್ಕಳ ಉದ್ಯಾನ' ವನ್ನು ಕಾಣಬಹುದು. ಇಲ್ಲಿ 'ವಾರ್ಷಿಕ ಟ್ರೀ ಫೆಸ್ಟಿವಲ್', ಅದ್ಧೂರಿಯಿಂದ ಆಚರಿಸಲ್ಪಡುತ್ತದೆ. ಟರ್ಟಲ್ ಬುಕ್ ಸೀರೀಸ್, ನಲ್ಲಿ ಉಲ್ಲೇಖಗೊಂಡ 'ಫ್ರಾಂಕ್ಲಿನ್ ಮಕ್ಕಳ ಉದ್ಯಾನ'ದ ಫ್ರಾಂಕ್ಲಿನ್ ನಿಂದ ಪ್ರೇರಿತವಾಗಿದೆ. ಉದ್ಯಾನವನ್ನು ೬ ವಿಭಾಗಗಳಾಗಿ ವಿಂಗಡಿಸಲಾಗಿದೆ. ಅಲ್ಲಿ ಮಕ್ಕಳು, ತೋಟಗಾರಿಕೆ, ಕಥೆಹೇಳುವುದು, ಮತ್ತು ೭ ಜನರ ಜೊತೆಯಲ್ಲಿ ಶಿಲ್ಪಕಲೆಯಲ್ಲಿ ಏನಾದರೂ ನಿರ್ಮಿಸಲು ಪ್ರಯತ್ನಿಸುವುದು, ಮುಂತಾದ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಾರೆ. ೪ ಎಕರೆ ಜಾಗದಲ್ಲಿ ಉದ್ಯಾನಗಳು, ಪ್ರಕೃತಿದತ್ತ ಕಾಡಿನ ಸನ್ನಿವೇಶ, ಕಥೆಹೇಳುವಿಕೆ, ರಂಗಮಂಚದ ಚಟುವಟಿಕೆಗಳು, ಮರದ ಮೇಲೆಮನೆ, ಕೆರೆಯಲ್ಲಿ ಕಾಡು ಪ್ರಾಣಿಗಳನ್ನು ಅರಸುವಿಕೆಯ ವ್ಯವಸ್ಥೆಯಿದೆ.